ಆಗಸವು ಯಾಕೋ ಮೌನವಾಗಿತ್ತು. ಮುಂಬರುವ ಗುಡುಗು ಸಿಡಿಲಿನ ಸೂಚನೆಯೋ ಇಲ್ಲಾ ಆರ್ಭಟದ ನಂತರದ ಶಾಂತತೆಯೊ ಅರ್ಥವಾಗದ ಮೀನಿನ ನಡಿಗೆಯಂತೆ.
ಆ ನಭದಂತೆ ಇತ್ತ ತನ್ನ ಮನಸ್ಸಿನ ಶಾಂತ ಚಿತ್ತತೆಯನ್ನು ಅವಲೋಕಿಸುತ್ತ ಕುಳಿತಿದ್ದ ರಾಧೆಗೆ ತನ್ನ ಮುಕುಂದನ ರಾಸ ಲೀಲೆಗಳ ಚಿತ್ತಾರ ಮೂಡುತ್ತಿತ್ತು.
ಅತ್ತ ಆ ಆಗಸವು ನೀಲ ಮೇಘಗಳಿಂದ ತುಂಬಿ "ನೀಲಿಯಾಕಾಶ"ವಾಗುತ್ತಿದ್ದಂತೆ ಇತ್ತ ರಾಧೆಯ ಮನಸ್ಸಿನಲ್ಲಿ ನೀಲಮೇಘ ಶ್ಯಾಮನ ಸವಿ ನೆನಪುಗಳ ಸಾಗರ ಶಾಂತವಾಗಿ "ರಾಧಾ ಗೋಪಾಲ"ಳಾದಳು.
No comments:
Post a Comment