Friday, August 17, 2018

90ರ ದಶಕದ ಶ್ರಾವಣ

ಅಗೋ ಶ್ರಾವಣ ಬಂದಾಯಿತು. ಗಿಡ ಮರ ಬಳ್ಳಿ ಖಗ ಮೃಗಗಳು ಖುಷಿಯಿಂದ ನಲಿದಾಡುವ ಸಮಯ.
ಧೋ ಎಂದು ಸುರಿಯುತ್ತಿರುವ ಸೋನೆ ಮಳೆಯ ಆ ಮಣ್ಣಿನ ಸುವಾಸನೆ, ಒಳಾಂಗಣದ ಆ ಚೌಕಿ ಮನೆ, ಹಪ್ಪಳ ಸಂಡಿಗೆಯ ಘಮ್ಮೆನ್ನುವ ಪರಿಮಳ ಮೂಗಿಗೆ ಬಡಿಯುತ್ತಿತ್ತು.
ಕೂಡು ಕುಟುಂಬದ ಭಟ್ಟರ ಮನೆಯಲ್ಲಿ ಸುಮಿತ್ರಮ್ಮನ ಬಿಸಿ ಬಿಸಿ ಗೆಣಸಿನ ಬೋಂಡ ಸವಿಯಲು ತಯಾರಾಗುತ್ತಿತ್ತು.
ಅಜ್ಜನ ಕಾಲಮೇಲೆ ಕುಳಿತ ಮುದ್ದಿನ ಮೊಮ್ಮಗಳಿಗೆ ಅಜ್ಜನ ಕೈಯಲ್ಲಿದ್ದ ಹಲಿಸಿನ ಹಣ್ಣಿನ ಹಪ್ಪಳದ ಮೇಲೆ ಕಣ್ಣು.
ಕೊಟ್ಟಿಗೆಯಲ್ಲಿದ್ದ ನಂದಿನಿಯು ಅಂಬಾss ಎನ್ನುತ್ತಾ ತನ್ನ ಇರುಹನ್ನು ನೆನಪಿಸುತಿತ್ತು.
ಇಂತಿಪ್ಪ ಮಲೆನಾಡು-ಕರಾವಳಿಯ ಮಳೆಗಾಲವು ಈಗಷ್ಟೇ 5ನೇ ಬಾರಿಗೆ ಅಂತು ಇಂತು ದಾಟಿದ Silk-Board ನಲ್ಲಿ ಯಾಕೋ ನಮ್ಮೂರ ಹುಡುಗಿಗೆ ನೆನಪಾಗಿ ಮುಖದಲ್ಲಿ ವಿಶಾದವೋ ವಿನೋದವೋ ತಿಳಿಯದಂತಃ ನಗುವು ನಕ್ಕು ಮರೆಯಾಯಿತು.

Wednesday, July 4, 2018

ಕೃಷ್ಣಪ್ರಿಯೆ ತುಳಸಿ

ತಂಗಾಳಿ ಬೀಸುತ್ತಿತ್ತು. ಅರಮನೆಯ ಗೋಡೆಗಳ ಮಧ್ಯದ ಕಿಟಕಿಯ ಬಳಿ ಕುಳಿತ್ತಿದ್ದ ತುಳಸಿಯ ಆಲೋಚನೆಗಳು ಒಂದಕ್ಕೊಂದು ತಳುಕು ಹಾಕುತ್ತಿರಲ್ಲಿಲ್ಲ.
ಸರಿ ತಪ್ಪುಗಳ ವಿಶ್ಲೇಷಣೆಗಳಲ್ಲಿ ಮುಳುಗಿತ್ತು ಮನವು.
ನಂದ ಕುಮಾರನ ನಿರಾಕರಣೆಗಿಂತಲೂ ತನ್ನದಲ್ಲದ ತಪ್ಪಿಗೆ ಸಿಕ್ಕ ಲೋಕದ ನಿಂದನೆಗಳಿಗೆ ಸಂಕುಚಿತಗೊಂಡಿದ್ದಳು.
ತುಳಸಿಯ ಮನದ ವ್ಯಾಕುಲತೆಯನ್ನು ಅರಿಯದೇ ಅವಳಿಗೆ ಸಿಕ್ಕ ಈ ಸ್ಥಾನ ನ್ಯಾಯವಾದುದ್ದೇ ಅಲ್ಲವೇ ಅನ್ನುವುದು ಅವರವರ ಭಾವಕ್ಕೆ ಬಿಟ್ಟಿದ್ದು.

Saturday, June 9, 2018

ನೀಲಿಯಾಕಾಶ

ಆಗಸವು ಯಾಕೋ ಮೌನವಾಗಿತ್ತು. ಮುಂಬರುವ ಗುಡುಗು ಸಿಡಿಲಿನ ಸೂಚನೆಯೋ ಇಲ್ಲಾ ಆರ್ಭಟದ ನಂತರದ ಶಾಂತತೆಯೊ ಅರ್ಥವಾಗದ ಮೀನಿನ ನಡಿಗೆಯಂತೆ.
ಆ ನಭದಂತೆ ಇತ್ತ ತನ್ನ ಮನಸ್ಸಿನ ಶಾಂತ ಚಿತ್ತತೆಯನ್ನು ಅವಲೋಕಿಸುತ್ತ ಕುಳಿತಿದ್ದ ರಾಧೆಗೆ ತನ್ನ ಮುಕುಂದನ ರಾಸ ಲೀಲೆಗಳ ಚಿತ್ತಾರ ಮೂಡುತ್ತಿತ್ತು.
ಅತ್ತ ಆ ಆಗಸವು ನೀಲ ಮೇಘಗಳಿಂದ ತುಂಬಿ "ನೀಲಿಯಾಕಾಶ"ವಾಗುತ್ತಿದ್ದಂತೆ ಇತ್ತ ರಾಧೆಯ ಮನಸ್ಸಿನಲ್ಲಿ ನೀಲಮೇಘ ಶ್ಯಾಮನ ಸವಿ ನೆನಪುಗಳ ಸಾಗರ ಶಾಂತವಾಗಿ "ರಾಧಾ ಗೋಪಾಲ"ಳಾದಳು.

Sunday, May 13, 2018

Mother.

Bhagavadgeetha Adhyaya 14 Shloka 3 :
Mama YoniH Mahat Brahma Tasmin Garbham Dadhaami Aham   |
SaMbhavaH Sarva-Bhuutaanaam TataH Bhavati Bhaarata  ||
Amma, mathrushree, Maa, mother all different words with same meaning.
Well, no article can full fill the Value of a mother.
She is the one who sacrifices an Apple for her child, for her family.
She is the one who will be ready to leave her partner for her child.
She is the one who will be ready to skip her meals for her child.
Today Mother's Day. Well a day isn't Enough to celebrate or to dedicate to our mothers.
Here let me tell you about my mother.
She is the one who was / is always there to me when I needed the most. She is the one who adopted 21st century for the sake of her kids.
She is the one who knows the value of girls eduction and her financial independence.
She is the one who knows how to handle my anger , how to handle my mood swings silently.
She is the one who was with me when I had a confusions about life.
She is the one who supported me when I broke down.
Today a senior Project Engineer in a well know Indian IT industry is big Zero without you My mom.
I love you to the core❤️. If you are happy we are happy.
I know this article doesn't match to your level but Mom I am still your baby Girl.
I LOVE YOU❤️.

Wednesday, May 9, 2018

ಗುಬ್ಬಚ್ಚಿ ಗೂಡು.

ಮೊಡ ಮುಸುಕಿದ ಆಕಾಶ, ಪಡುವಣದ ಅಂಚಿನಲ್ಲಿ ಕೆಂಪಾದ ಸೂರ್ಯ. ತನ್ನದೇ ಕನಸಿನಲ್ಲಿ ಗುಬ್ಬಿಯ ಕಲರವ, ಜೊತೆಗಾರ ಕಾಜಾಣದ ಜೂತೆ ಜೂಟಾಟ.
ಗುಬ್ಬಚ್ಚಿ ಕಾಜಾಣಗಳ ಈ ಆಟದಲ್ಲಿ ಕೆಂಪಾದ ನಭವೂ ನಾಚಿ ಮತ್ತಷ್ಟೂ ಕೆಂಪಾಗಿ ನಗುತಲಿತ್ತು.
ಆಟದ ತಲ್ಲೀನತೆಯಲ್ಲಿದ್ದ ಗುಬ್ಬಚ್ಚಿಗೆ ಬೀಸಿದ ಗಾಳಿಯ ಪರಿವೇ ಇಲ್ಲ. ಇತ್ತ ಕಾಜಾಣ ಬೀಸಿದ ಗಾಳಿಯ ಕಡೆ ಗುಬ್ಬಚ್ಚಿಯನ್ನು ಬಿಟ್ಟು ಪಯಣಿಸಿತು.
ಪುಟಾಣಿ ಗುಬ್ಬಿಯು ಬಿರುಗಾಳಿಯ ತೆಕ್ಕೆಯಲ್ಲಿ ಕಾಜಾಣವ ಹುಡುಕುತಲ್ಲಿತ್ತು.
ಬೀಸಿದ ಗಾಳಿಯ ಆರ್ಭಟ ತಂಗಾಳಿ ಆದಾಗ ತನ್ನ ಕಾಜಾಣದ ನೆನಪಿನಲ್ಲಿ ಗುಬ್ಬಚ್ಚಿಯು ಗೂಡನ್ನು ಸೇರಿ ವಾಸ್ತವಕ್ಕೆ ಮರಳಿತು.