Friday, August 17, 2018

90ರ ದಶಕದ ಶ್ರಾವಣ

ಅಗೋ ಶ್ರಾವಣ ಬಂದಾಯಿತು. ಗಿಡ ಮರ ಬಳ್ಳಿ ಖಗ ಮೃಗಗಳು ಖುಷಿಯಿಂದ ನಲಿದಾಡುವ ಸಮಯ.
ಧೋ ಎಂದು ಸುರಿಯುತ್ತಿರುವ ಸೋನೆ ಮಳೆಯ ಆ ಮಣ್ಣಿನ ಸುವಾಸನೆ, ಒಳಾಂಗಣದ ಆ ಚೌಕಿ ಮನೆ, ಹಪ್ಪಳ ಸಂಡಿಗೆಯ ಘಮ್ಮೆನ್ನುವ ಪರಿಮಳ ಮೂಗಿಗೆ ಬಡಿಯುತ್ತಿತ್ತು.
ಕೂಡು ಕುಟುಂಬದ ಭಟ್ಟರ ಮನೆಯಲ್ಲಿ ಸುಮಿತ್ರಮ್ಮನ ಬಿಸಿ ಬಿಸಿ ಗೆಣಸಿನ ಬೋಂಡ ಸವಿಯಲು ತಯಾರಾಗುತ್ತಿತ್ತು.
ಅಜ್ಜನ ಕಾಲಮೇಲೆ ಕುಳಿತ ಮುದ್ದಿನ ಮೊಮ್ಮಗಳಿಗೆ ಅಜ್ಜನ ಕೈಯಲ್ಲಿದ್ದ ಹಲಿಸಿನ ಹಣ್ಣಿನ ಹಪ್ಪಳದ ಮೇಲೆ ಕಣ್ಣು.
ಕೊಟ್ಟಿಗೆಯಲ್ಲಿದ್ದ ನಂದಿನಿಯು ಅಂಬಾss ಎನ್ನುತ್ತಾ ತನ್ನ ಇರುಹನ್ನು ನೆನಪಿಸುತಿತ್ತು.
ಇಂತಿಪ್ಪ ಮಲೆನಾಡು-ಕರಾವಳಿಯ ಮಳೆಗಾಲವು ಈಗಷ್ಟೇ 5ನೇ ಬಾರಿಗೆ ಅಂತು ಇಂತು ದಾಟಿದ Silk-Board ನಲ್ಲಿ ಯಾಕೋ ನಮ್ಮೂರ ಹುಡುಗಿಗೆ ನೆನಪಾಗಿ ಮುಖದಲ್ಲಿ ವಿಶಾದವೋ ವಿನೋದವೋ ತಿಳಿಯದಂತಃ ನಗುವು ನಕ್ಕು ಮರೆಯಾಯಿತು.